Thursday, June 2, 2016

ಪಂಚ್ ಫಲಿತಾಂಶ - ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಂದಿದೆ..

ಮೊದಲನೆಯದಾಗಿ, ದಕ್ಷಿಣ ಭಾರತದ ನಮ್ಮ ನೆರೆ ರಾಜ್ಯವಾದ ತಮಿಳುನಾಡಿನಲ್ಲಿ ಮತ್ತೊಮ್ಮೆ 'ಅಮ್ಮ' ನ ಕೂಗು ಎಲ್ಲ ಮತದಾರರ ಮನ ಮುಟ್ಟಿದಂತಿದೆ. ತಮಿಳುನಾಡಿನಲ್ಲಿ, ಎಐಎಡಿಮ್ ಕೆ ಯ, ಜಯಲಲಿತಾ "ಅಮ್ಮ" ಮತ್ತೆ ಜಯಭೇರಿ ಬಾರಿಸಿದ್ಧಾರೆ. ನೀರಿನಂತೆ ಹರಿಸಿದ ಉಚಿತ ಉಡುಗೊರೆಗಳಿಗೋಯೇನೋ ಗೊತ್ತಿಲ್ಲ !! ಈ ಹಿಂದೆ ನಡೆದ ಎಲ್ಲಾ ಘಟನೆಗಳನ್ನೂ ಮತದಾರ ಸಂಪೂರ್ಣವಾಗಿ ಮರೆತಂತಿದೆ.. ಏನೇ ಆದರೊ ಅಮ್ಮನ ರಾಜಕೀಯ ತಂತ್ರಗಾರಿಕೆಯನ್ನು ಗಮನಿಸಲೇಬೇಕು ಹಾಗೂ ಮೆಚ್ಚಲೇಬೇಕಾದ ವಿಷಯ. 142/232

ಎರಡನೆಯದಾಗಿ, ದಕ್ಷಿಣ ಭಾರತದ ನಮ್ಮ ಮತ್ತೊಂದು ನೆರೆ ರಾಜ್ಯವಾದ ಕೇರಳದಲ್ಲಿ ನಿರೀಕ್ಷಿತ ಪಲಿತಾಂಶವೆಂದು ಕೊಂಡರೂ, ಒಂದು ರೀತಿಯ ಆಶ್ಚರ್ಯವೂ ಹೌದು!! ಯಾಕೇಂ್ತೀರ ? ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗವು (ಎಲ್‌.ಡಿ.ಎಫ್), ಆಡಳಿತಾರೂಢ ಸಂಯುಕ್ತ ಪ್ರಜಾಸತ್ತಾತ್ಮಕ ರಂಗವನ್ನು ಧೂಳೀಪಟ ಮಾಡುವಲ್ಲಿ ಭಾರಿ ಯಶಸ್ಸು ಸಾಧಿಸಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಬಿಜೆಪಿಯು ವಿಧಾನಸಭೆಗೆ ಪದಾರ್ಪಣೆ ಮಾಡುವ ಸುಯೋಗಕ್ಕೆ ಪಾತ್ರವಾಗಿದೆ. ಎಲ್.ಡಿ.ಎಫ್ ಪಕ್ಷವನ್ನು ಪ್ರತಿನಿದಿಸಿ ಚುನಾವಣಾ ಕಣಕ್ಕೆ ಇಳಿದ ವಿ. ಎಸ್. ಅಚ್ಚುತಾನಂದನ್ ಅವರ ವಯಸ್ಸೇನು ಕಮ್ಮಿ ಇಲ್ಲಾ ರೀ.. ಸರಿ ಸುಮಾರು 93 ವರ್ಷ ಅವರಿಗೆ. ಸಾಮಾನ್ಯವಾಗಿ ವಯಸ್ಸಾದವರಿಗೆ ಅಧಿಕಾರ ಕೊಟ್ಟರೆ ಈ ವಯಸ್ಸಿನಲ್ಲಿ ಏನು ತಾನೇ ಮಾಡಿಯಾರು ಅಥವಾ ಎಷ್ಟು ದಿನ ಮಾಡಿಯಾರು ಎಂಬ ಯೋಚನೆ ಯಾವುದೇ ಮತದಾರನಿಗೂ ಬಾರದೇಹೋಗದು. ಆದರೆ, ವಿ. ಎಸ್. ರವರ ಉತ್ಸಾಹ, ಜೀವನ ಶೈಲಿ, ಸಂಘಟನಾ ಶಕ್ತಿ, ಕಾರ್ಯತತ್ಪರತೆ, ಮುಂದಾಳತ್ವದ ಗುಣಗಳು ಇವೆಲ್ಲಾ ಪ್ರಾಯಶಃ ಮತದಾರ ಇವರ ವಯಸನ್ನು ಪಕ್ಕ ಕಿಟ್ಟು ಇವರಿಗೆ ಮತ ಹಾಕಿ ಈ ಭಾರೀ ಗೆಲ್ಲಿಸಿದ್ದಾರೆ. ತಿರುವನಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಗೆ ಹೀನಾಯ ಸೋಲು. 91/140

ಮೂರನೆಯದಾಗಿ, ಪಶ್ಚಿಮ ಬಂಗಾಳ. ಇಲ್ಲಿ ಮತ್ತೋರ್ವಪ್ರತಿಭಾನ್ವಿತ ಮಹಿಳೆ ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನೆರ್ಜೀ ಎದುರಾಳಿ ಪಕ್ಷಗಳನ್ನು ನಿಜವಾಗಿ ಗುಡಿಸಿ ಗುಂಡಾಂತರ ಮಾಡಿದ್ದಾರೆ ಅಂದ್ರೆ ತಪ್ಪಾಗಲಾರದು. ಇವರ ಮುಂದೆ ಎಡರಂಗ ಕಾಂಗ್ರೆಸ್ ಆಟ ನಡೆಯಲಿಲ್ಲ. ಬಿಜೆಪಿಯ ಆಟವೂ ಕೂಡ ಇವರ ಎದುರು ನಡೆಯಲಿಲ್ಲ. ಎರಡನೆಯ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. 217/294

ನಾಲ್ಕನೆಯಾದ್ದಾಗಿ, ನಮ್ಮ ಈಶಾನ್ಯ ಭಾಗಾದ ಅಸ್ಸಾಂ ರಾಜ್ಯ. ದೆಹಲಿ, ಬಿಹಾರದ ನಂತರ ಮೋದಿ ಮತ್ತು ಅಮಿತ್ ಶಾಗೆ ಒಂದು ರೀತಿಯ ರಿಲೀಫ್ ಅಂತಾನೆ ಹೇಳಬಹುದು. ಯಾಕಂದ್ರೆ, ಭಾರತದ ಈಶಾನ್ಯ ರಾಜ್ಯಗಳಲ್ಲಿ ನಮ್ಮ ಕೇಂದ್ರಾಡಳಿತ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಗೆ ಎಲ್ಲೂ ಅಸ್ತಿತ್ವವೇ ಇಲ್ಲದಿದ್ದಂತ ಪರಿಸ್ತಿತಿಯಲ್ಲಿ ಇದು ಅವರಿಗೆ ಪ್ರಪ್ರಥಮ ಸ್ಪಷ್ಟ ಬಹುಮತದ ಗೆಲುವು ಹಾಗೂ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಪಡೆಯುವುದು ಬಹುತೇಕ ಖಚಿತವಾಗಿದೆ. ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಚುನಾವಣಾ ಕಾರ್ಯತಂತ್ರ ರೂಪಿಸಿ ಚುನಾವಣಾ ಕಣಕ್ಕಿಳಿದಿದ್ದರಿಂದ ಭಾರೀ ಬಹುಮತದೊಂದಿಗೆ ಬಿಜೆಪಿ ಗೆಲುವು ಸಾಧಿಸಿದೆ. ಸರ್ಬಾನಂದ ಸೋನಾವಾಲ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರಲಿದ್ದಾರೆ. ಸುಮಾರು ಹದಿನೈದು ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ಒಂದು ಮುಕ್ತಾಯ ಪರದೆ ಎಳೆದಂತಿದೆ. 'ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಐತಿಹಾಸಿಕ ಜನಾದೇಶ'ವೆಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯಶಸ್ಸಿಗೆ ಪ್ರತಿಕ್ರಿಯಿಸಿದ್ದಾರೆ. 88/126

ಕೊನೆಯದಾಗಿ, ಪುದುಚೇರಿಯಲ್ಲಿ ಅಷ್ಟೇನೂ ಪೈಪೋಟಿ ಇಲ್ಲದೆ ಇದ್ದರೂ ಕಣದಲ್ಲಿ ಗೆದ್ದವರು ಯಾರು ಎಂದು ಹೇಳಲು ಇನ್ನೂ ಕಾದು ನೋಡಬೇಕು. ಪುದುಚೆರಿಯಲ್ಲಿ ಮುಖ್ಯಮಂತ್ರಿ ಎಐಎನ್‌ಆರ್‌ಸಿ ಹಾಗೂ ಕಾಂಗ್ರೆಸ್ – ಡಿ.ಎಂ.ಕೆ. ಮೈತ್ರಿಕೂಟ ಒಟ್ಟು ಮೂವತ್ತು ಸ್ಥಾನಗಳಲ್ಲಿ ಸಮಬಲದ ಪ್ರದರ್ಶನ ನೀಡುತ್ತಿದ್ದು, ಅಂತಿಮವಾಗಿ ಜಯಮಾಲೆ ಯಾರ ಕೊರಳಿಗೆ ಎಂಬುದು ಇದೀಗ ಕುತೂಹಲದ ಪ್ರಶ್ನೆ. ಆದರೆ ಐದೂ ಪಕ್ಷಗಳ ಫಲಿತಾಂಶ ವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಕಾಂಗ್ರೆಸ್ ಪಕ್ಷ. ಆತ್ಮಾವಲೋಕನ ಮಾಡ್ಕೊಳ್ತಾರೋ ಇಲ್ಲವೋ ಗೊತ್ತಿಲ್ಲ.. ಮಾಡ್ಕೊಂಡ್ರೆ ಅವ್ರ್ಗೇ ಒಳ್ಳೆದು.. ಇಲ್ಲಾಂದ್ರೆ ಬೇರೆ ಪಕ್ಷಗಳಿಗೆ ಒಳ್ಳೆದು.. ಅಷ್ಟೇ.. ಕಾಂಗ್ರೆಸ್ ನ್ ಈ ಹೀನಾಯ ಸೋಲು ಮುಂದೊಂದು ದಿನ ನಮ್ಮ ರಾಜ್ಯದ ಮೇಲೂ ಪರಿಣಾಮ ಬೀರಬಹುದು !! 17/30.

No comments:

Post a Comment