Thursday, June 2, 2016

ಪ್ರೀತಿಯ ಸ್ನೇಹಿತರೇ, ಆತ್ಮೀಯ ಬಂಧುಗಳೇ, ಹಾಗೂ ವಾಟ್ಸ್ಆಪ್ ಪ್ರೇಮಿಗಳೇ...

ಇತ್ತೀಚೆಗೆ ನಾನು ಓದುತ್ತಿದ್ದ ಒಂದು ಮಾಧ್ಯಮ ಪುಸ್ತಕದ ಕೆಲವು ಆಯ್ದ ಸೂಕ್ಷ್ಮವಿಷಯಗಳ ಬಗ್ಗೆ ಇಲ್ಲಿ ಹಂಚಿಕೊಳ್ಳುತ್ತಾ ನನ್ನ ಅಭಿಪ್ರಾಯವನ್ನೂ ನಿಮ್ಮ ಮುಂದಿಡುತ್ತಿದ್ದೀನಿ...

ನಿಮೆಲ್ಲರಿಗೂ ತಿಳಿದಿರುವಂತೆ,
ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಮಳೆ ಇಲ್ಲ. ಕುಡಿಯುವುದಕ್ಕೆ ಒಂದು ಹನಿ ನೀರು ಸಿಗುತಿಲ್ಲ. ಮಲಗಲು ಸೂರಿಲ್ಲ. ಆಟವಾಡಲು ಮೈದಾನಗಳಿಲ್ಲ. ನಡೆದಾಡಲು ಯೋಗ್ಯವಾದ ರಸ್ತೆಗಳಿಲ್ಲ. ಜನ ಬಯಸೋ ಅಂತ ಒಳ್ಳೆ ಆಡಳಿತವಿಲ್ಲ. ಬಡವರಿಗೆ ಬೆಲೆ ಇಲ್ಲ. ಭಾವನೆಗಳಿಗೆ ಅರ್ಥವಿಲ್ಲ. ರೈತರಿಗೆ ರಕ್ಷಣೆ ಇಲ್ಲ. ಓದು ಬರವಣಿಗೆಗೆ ಜಾಗವೇ ಇಲ್ಲ. ದ್ವೇಷದ ರಾಜಕಾರಣಕ್ಕೆ ಕೊನೆಯೇ ಇಲ್ಲ...ಈ ಪಟ್ಟಿಗೂ ಕೊನೆ ಇಲ್ಲ....

ನಾನೊಬ್ಬ ಹವ್ಯಾಸಿ ಪತ್ರಕರ್ತ ಹಾಗೂ ಛಾಯಾಗ್ರಾಹಕ..
"ಈ ಜಗತ್ತನ್ನು ಬದಲಿಸಬೇಕೆಂದು ನೀವು ಬಯಸಿದರೆ, ಅದಕ್ಕಿರುವ ತಾತ್ಕಾಲಿಕ ಆಯುಧವೆಂದರೆ ಪತ್ರಿಕೋದ್ಯಮವೆಂಬುದನ್ನು ನಾನು ಈಗಲೂ ನಂಬುತ್ತೇನೆ" ಎನ್ನುವ ಟಾಮ್ ಸ್ಟೊಪಾರ್ಡ್ನ, ಈ ಮಾತು ಮಾಧ್ಯಮದ ವಿರಾಟ್ ಶಕ್ತಿಗೆ ಹಾಗೂ ಅದರ ಮಿತಿಗೆ ಸಾಕ್ಷಿ.
ಹಾಗೂ ನನಗೆನಿಸುವ ಮಟ್ಟಿಗೆ ಏಕೈಕ ಸಾಧನೆಯ ಹಾದಿಯೂ ಹೌದು...

ಈ ನಿಟ್ಟಿನಲ್ಲಿ ಯೋಚಿಸುತ್ತಿರುವಾಗು ನನಗನಿಸಿದ್ದು "ನಾವು ಕಲಿತಿದ್ದೇನು, ಸಾಧಿಸಿದ್ದೇನು" ಎಂದು..
ನನಗೆ ಛಾಯಾಗ್ರಹಣದಷ್ಟೇ ಪ್ರಿಯವಾದ, ಮನಸ್ಸಿಗೆ ಹತ್ತಿರವಾದ ಹವ್ಯಾಸಗಳೆಂದರೆ ಪುಸ್ತಕಗಳನ್ನು ಓದುವುದು ಹಾಗೂ ಕ್ರಿಯಾಶೀಲ ಬರವಣಿಗೆ. ಒಬ್ಬನೇ ಕೂತು ಇದರ ಬಗ್ಗೆ ವಿಚಾರಮಾಡಿದಾಗ ನನಗನಿಸಿದ್ದು ಇವತ್ತಿನ ವಾಟ್ಸ್ಆಪ್, ಟ್ವಿಟರ್ ಗಳ ಮದ್ಯೆ ನನ್ನ ಓದು ಮತ್ತು ಬರವಣಿಗೆ ಕ್ಷೀಣಿಸುತ್ತಿದೆಯೇ ಎಂದು..

ಒಂದು ಬಾರಿ ಹಿಂತಿರುಗಿ ನೋಡಿದರೆ, ಅಯ್ಯೋ ಎಷ್ಟೋಂದು ಅಮೂಲ್ಯವಾದ ಸಮಯವನ್ನು ಹಾಳುಮಾಡಿದೆನಲ್ಲ ಎಂದು ಬೇಸರವಾಗುತ್ತದೆ. ಹಾಗೆಯೇ ತಾತ್ಕಾಲಿಕವಾಗಿ ಉಪಯುಕ್ತವೆನಿಸುವ ಈ ಎಲ್ಲಾ ಸೂಕಾಲ್ಡ್ ಸೋಶಿಯಲ್ ಮೀಡಿಯಾದ ಬಳಕೆಯಿಂದ ನಮ್ಮತನವನ್ನು ಬಿಟ್ಟು ಕೊಳ್ಳುತ್ತಾ, ಭಾವನೆಗಳೇ ಇಲ್ಲದೆ ಬದುಕುತ್ತಿದ್ದೀವೇನೋ ಎಂದೆನಿಸಲು ಶುರುವಾಗಿದೆ.
ಯಾರಾದರೂ ಮೆಸೇಜ್ ಕಳುಹಿಸಿದ್ದಾರೇನೋ, ತತ್‌ಕ್ಷಣ ಪ್ರತಿಕ್ರಯಿಸದಿದ್ದರೆ ಏನೋ ? ಉತ್ತರಿಸದಿದ್ದರೆ ಏನೆಂದು ಕೊಳ್ಳುತ್ತಾರೋ ? ಗೊತ್ತಲ್ಲ ಅಪಹಾಸ್ಯಗಳು, ಟೀಕೆ ಟಿಪ್ಪಣಿಗಳು ಇತ್ಯಾದಿ... ನಾವೇನೋ ಅದಕ್ಕೆ ಬದ್ದರಾಗಿದ್ದೆವೇನೋ ಎನ್ನುವ ರೀತಿ.. ನಮಗೆ ಅನುಕೂಲ ವಾಗುವಂತೆ, ಇಷ್ಟವಾದಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸ್ವಾತಂತ್ರವೇ ಇಲ್ಲದಂತಾಗಿದೆ. ಒಂದು ರೀತಿಯ ಕಟ್ಟುಪಾಡಾಗಿಬಿಟ್ಟಿದೆ.. ಸಂಬಂಧಗಳ ಬಗ್ಗೆ ಯೋಚಿಸಲೂ ಸಮಯವಿಲ್ಲದಂತಾಗಿದೆ.

ನಿಜವಾಗಿಯೂ ನಿಮ್ಮ ಮನಸಾಕ್ಷಿಯಾಗಿ ಹೇಳಿ.. ಒಂದು ನಿಮಿಷ ಮನಸ್ಸು ಪ್ರಶಾಂತವಾಗಿರಲು ಇವುಗಳೆಲ್ಲ ಒಂದು ರೀತಿಯ ತೊಡಕುಗಳು ಎಂದೆನಿಸುತ್ತದೆ. ಹೌದೋ ಅಲ್ಲವೋ !!

ಅವೆಲ್ಲಾ ಬಿಡಿ, ಸದ್ಯಕ್ಕೆ ನಾನು ಇವೆಲ್ಲದರಿಂದ ದೂರವಿರಬೇಕು ಎಂದು ಮನಸ್ಸು ಮಾಡಿದ್ದೀನಿ..
ವಾಟ್ಸಾಪ್ ಇಲ್ಲದೆ ಇದ್ದರೆ ಬೆಳಗಾಗುವುದೇ ಇಲ್ಲ, ಜೀವನವೇ ಇಲ್ಲ.. ನೀವ್ ಯಾವ ಕಾಲದಲ್ಲಿದ್ದೀರಾ ಸ್ವಾಮಿ.. ಅಂತ ಹೇಳುವವರು ನಮ್ಮ ಸುತ್ತಲೂ ದಿನಾ ನೋಡುತ್ತೀವಿ.. ನೋಡೇಬಿಡೋಣ ಒಂದು ಕೈಅಂತ ಸದ್ಯಕ್ಕೆ ವಾಟ್ಸಾಪ್ ನಿಂದ ದೂರಸರಿಯುತ್ತಿದೇನೆ.. ನನಗಿಷ್ಟವಾದ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂದಿದ್ದೇನೆ..

ಯಾವತ್ತಿಗೂ ನಮನ್ನು ಕೈಹಿಡಿಯುವ ಪುಸ್ತಕಗಳು, ಬರಹಗಳು ಇವುಗಳ ಕಡೆಗೆ ನಿರಂತರವಾಗಿ ಸಮಯವನ್ನು ಮೀಸಲಿಡಲು ಯೋಚಿಸಿದ್ದೇನೆ ಮತ್ತು ಅದಕ್ಕೆ ಪೂರಕವಾಗಿ ನನ್ನ ಮನಸ್ಸು ಕೂಡ ಹಾತೊರೆಯುತ್ತಿದೆ...

ನಿಮೆಲ್ಲರ ದೂರವಾಣಿ, ಮೊಬೈಲ್ ನಂಬರ್ ಗಳು ನನ್ನ ಬಳಿ ಇಟ್ಟು ಕೊಂಡಿರುವೆ.. ಮಾತನಾಡ ಬೇಕೆಂದೆನಿಸಿದರೆ ಕರೆ ಮಾಡಿ ಮಾತನಾಡುವೆ..ನೀವೂ ಕರೆಮಾಡಿ ಮನಸಾರೆ ಮಾತನಾಡೋಣ...

ಇದು ಯಾರಿಗೂ ಕೈತೋರಿಸಿ ಮಾತಾಡುವ, ಟೀಕಿಸುವ ಉದ್ದೇಶವಂತೂ ಅಲ್ಲವೇ ಅಲ್ಲ, ಅದಕ್ಕೆ ನನಗೆ ಸಮಯವೂ ಇಲ್ಲ.. ನಿಮ್ಮ ನಿಮ್ಮ ಆಲೋಚನೆಗಳಿಗೆ, ಆದರ್ಶಗಳಿಗೆ, ಸ್ವಾತಂತ್ರಕ್ಕೆ ನಮ್ಮ ಅಡ್ಡಿಯೇನೂ ಇಲ್ಲ..ಅಥವಾ ನೀವಂದು ಕೊಂಡಂತೆ ನಾನು ಇವೆಲ್ಲದರ ವಿರೋಧಿಯೂ ಅಲ್ಲ !!

ಟೈಪ್ ಮಾಡಲು ಸಮಯ, ತಾಳ್ಮೆ ಎರಡೂ ಇದ್ದಾಗ ಇದೆ ಸಂದೇಶವನ್ನು ವಾಟ್ಸಾಪ್ ನಲ್ಲೂ ಕಳುಹಿಸುತ್ತೀನಿ...
ಒಂದನ್ನು ಪಡೆಯಬೇಕಾದರೆ, ಇನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವಂತೆ...

ಇದು ಕೇವಲ ನಾನು ತೆಗೆದು ಕೊಂಡ ಒಂದು ಹೆಜ್ಜೆ ಅಷ್ಟೇ
ನನಗೆ ಹೇಳಬೇಕೆಂದನಿಸಿತು, ಅದಕ್ಕೆ ಇಷ್ಟೆಲ್ಲಾ ಹೇಳ್ದೆ...

ನಮಸ್ಕಾರ,
ರಾಘವೇಂದ್ರ ಪ್ರಸಾದ್. ಹೆಚ್. ಪಿ.
ಮೊಬೈಲ್: ೯೯ ೦೦ ೧೪೯೯೭೦

No comments:

Post a Comment