ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳಿಗೆ ತಿಲಾಂಜಲಿ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆಗಳು..
೫೦೦ ಮತ್ತು ೧೦೦೦ ರೂಪಾಯಿ ಮುಖ ಬೆಲೆಯ ನೋಟುಗಳ ಅಧಿಕೃತ ಚಲಾವಣೆಯನ್ನು ರದ್ದು ಗೊಳಿಸಿರುವ ಕೇಂದ್ರ ಸರ್ಕಾರದ ದಿಢೀರ್ ಘೋಷಣೆ !! ನವೆಂಬರ್೮ನೇ ತಾರೀಖಿನ ದಿನ ಮಧ್ಯರಾತ್ರಿ ಇಂದಲೇ ಜಾರಿ !!
ಸಾಮಾನ್ಯ ಜನರ ಅನುಕೂಲಕ್ಕೆ ಮತ್ತು ತಿಳುವಳಿಕೆಗೆ ಕೆಲವೊಂದು ಉಪಯುಕ್ತ ಮಾಹಿತಿ:
೧. ನಾಳೆ ಬ್ಯಾಂಕ್ ಮತ್ತು ಎಟಿಎಂ ಗಳು ಸ್ತಗಿತ !! ಆದರೇ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವದಕ್ಕೆ ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ..
೨. ನ್ಯಾಯವಾಗಿ ಕಷ್ಟಪಟ್ಟು ಗಳಿಸಿರುವ ಅಥವಾ ಸಂಗ್ರಹಿಸಿಟ್ಟಿರುವ ತಮ್ಮ ಹಣದ ಬಗ್ಗೆ ನಾಗರೀಕರು ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ.
೩. ಈಗಾಗಲೇ ತಮ್ಮ ಬ್ಯಾಂಕಿನ ಖಾತೆಯಲ್ಲಿರುವ ಹಣಕ್ಕೆ ಯಾವುದೇ ತೊಂದರೆಇಲ್ಲ. ಅದು ನಿಮ್ಮ ಖಾತೆಯಲ್ಲಿಯೇ ಸುರಕ್ಷಿತವಾಗಿಯೇ ಇರುತ್ತದೆ.
೪. ೫೦೦ ಮತ್ತು ೧೦೦೦ ರೂಪಾಯಿ ಮುಖ ಬೆಲೆಯ ನೋಟುಗಳನ್ನು ನಾಳೆ ಮತ್ತು ನಾಡಿದ್ದು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಛೇರಿಗೆ ಹೋಗಿ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಬಹುದು. ಹಣ ಜಮಾ ಮಾಡುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ.
೫. ಹಣವನ್ನು ತಮ್ಮ ಖಾತೆಗೆ ಜಮಾಮಾಡಬಹುದು ಅಥವಾ ೫೦೦ ಮತ್ತು ೧೦೦೦ ರೂಪಾಯಿ ಮುಖ ಬೆಲೆಯ ಹಳೆಯ ನೋಟುಗಳನ್ನು ಕೊಟ್ಟು ಹೊಸದಾಗಿ ಚಲಾವಣೆಗೆ ಬಿಟ್ಟಿರುವ ಅಧಿಕೃತ ೫೦೦ ಮತ್ತು ೨೦೦೦ ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು.
೬. ಆದರೆ ನಾಳೆ ಮತ್ತು ನಾಡಿದ್ದು ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ಮೊತ್ತವನ್ನು ಒಂದು ದಿನಕ್ಕೆ ೪೦೦೦ ಸಾವಿರ ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದೆ. ತದನಂತರ, ತಮ್ಮ ಹತ್ತಿರ ವಿರುವ ಅಧಿಕೃತ ಹಣವನ್ನು ಡಿಸೆಂಬರ್ ೩೧ನೇ ತಾರೀಖಿನ ವರೆಗೆ ಯಾವುದೇ ಮಿತಿಇಲ್ಲದೆ ಹೊಸ ೫೦೦ ಮತ್ತು ೨೦೦೦ ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು. ೫೦ ದಿನಗಳ ಕಾಲಾವಕಾಶ ವಿರುತ್ತದೆ.
೭. ಎಟಿಎಂ ಮೂಲಕ ದಿನಕ್ಕೆ ೨ ಸಾವಿರವನ್ನಷ್ಟೇ ಡ್ರಾ ಮಾಡಬಹುದು. ಬ್ಯಾಂಕ್ ಖಾತೆಯಿಂದ ಹಣ ವಿತ್‌ಡ್ರಾ ಮಾಡಬೇಕೆಂದರೆ, ದಿನಕ್ಕೆ ೧೦ ಸಾವಿರ ಮತ್ತು ವಾರಕ್ಕೆ ೨೦ ಸಾವಿರದ ಮಿತಿ ವಿಸಲಾಗಿದೆ.
೮. ಆಧಾರ್ ಕಾರ್ಡ್ ಸೇರಿದಂತೆ ಸೂಕ್ತ ಗುರುತಿನ ಚೀಟಿ ತೋರಿಸಿ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ನೋಟು ಬದಲಿಸಿಕೊಳ್ಳಬಹುದು.
೯. ನಾಳೆ ದೇಶದ ಯಾವುದೇ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ ಹಾಗೂ ನವೆಂಬರ್ ೯ ಮತ್ತು ನವೆಂಬರ್ ೧೦ ರಂದು ಎಟಿಎಂ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.
೧೦. ನಗದು ರಹಿತ ವ್ಯವಹಾರಗಳಿಗೆ ಅಂದರೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್‌ಲೈನ್ ಫಂಡ್ ಟ್ರಾನ್ಸ್ಫರ್ ಇವುಗಳಿಗೆ ಯಾವುದೇ ತೊಂದರೆ ಇಲ್ಲ, ಎಂದಿನಂತೆ ಕಾರ್ಯನಿರ್ವಹಿಸಬಹುದು.
೧೧. ಆಸ್ಪತ್ರೆ ಮತ್ತು ರೈಲು ಬುಕ್ಕಿಂಗ್‌ಗಾಗಿ ನವೆಂಬರ್ ೧೧ರವರೆಗೊ ೫೦೦ ಮತ್ತು ೧೦೦೦ ಸಾವಿರ ರೂಪಾಯಿಯ ಹಳೆಯ ನೋಟುಗಳನ್ನು ಬಳಸಬಹುದಾಗಿದೆ.
೧೨. ಹೊಸ ಲಕ್ಷಣ, ಹೊಸ ವಿನ್ಯಾಸ, ಹೊಸ ಅಳತೆಯನ್ನು ಹೊಂದಿರುವ ಈ ನೋಟುಗಳು ನ. ೧೦ ರಿಂದ ಚಲಾವಣೆಗೆ ಬರಲಿವೆ.
೧೩. ರೂ. ೨೦೦೦ ನೋಟಿನಲ್ಲಿ ಒಂದು ಕಡೆಯಲ್ಲಿ ಮಂಗಳಯಾನ್ ಎಂದು ಬರೆಯಲಾಗಿದೆ.
ಈ ಒಂದು ದಿಟ್ಟ ನಿರ್ಧಾರದ ಹಿಂದಿರುವ ಚಿಂತನೆ, ಆಲೋಚನೆ, ಹಾಗೂ ದೇಶವನ್ನು ಒಂದು ಹೊಸದಾದ ಕ್ರಾಂತಿಗೆ ಮತ್ತು ನಿಲುವಿಗೆ ಒಯ್ಯುವ ಯೋಚನೆ ಇನ್ನೂ ಮುಖ್ಯವಾಗಿ ಹೇಳುವುದಾದರೆ ಈ ಹೊಸ ನೋಟುಗಳ ಮುದ್ರಣದಲ್ಲಿ ಬಳಸಿರುವ ತಾಂತ್ರಿಕತೆ ಬಗ್ಗೆ ಇನ್ನಷ್ಟು ಕುತೂಹಲಕಾರಿ ಮಾಹಿತಿಗಳಿವೆ...
ಜೈ ಕರ್ನಾಟಕ ಮಾತೆ.. ಕನ್ನಡವೇ ಸತ್ಯ, ಕನ್ನಡವೇ ನಿತ್ಯ..
ರಾಘವೇಂದ್ರ ಪ್ರಸಾದ್
ಬೆಂಗಳೂರು